ಸರಿಯಾಗಿ ನೆನಪಿದೆ ನನಗೆ
ಸರಿಯಾಗಿ ನೆನಪಿದೆ ನನಗೆ
ಇದಕೆಲ್ಲ ಕಾರಣ ಕಿರುನಗೆ
ಮನದ ಪ್ರತಿ ಗಲ್ಲಿಯೊಳಗು
ನಿನ್ನದೆ ಮೆರವಣಿಗೆ
ಕನಸಿನ ಕುಲುಮೆಗೆ ಉಸಿರನು ಊದುತ
ಕಿಡಿ ಹಾರುವುದು ಇನ್ನು ಖಚಿತ|| ಪ ||
ಕಣ್ಣಲ್ಲೇ ಇದೆ ಎಲ್ಲಾ ಕಾಗದ
ನೀನೆ ನನ್ನಯ ಅಂಚೆ ಪೆಟ್ಟಿಗೆ
ಏನೇ ಕಂಡರು ನೀನೆ ಜ್ಞಾಪಕ
ನೀನೇ ಔಷಧಿ ನನ್ನ ಹುಚ್ಚಿಗೆ
ತೆರೆದು ನೀನು ಮುದ್ದಾದ ಅಧ್ಯಾಯ
ಸಿಗದೆ ಇದ್ರೆ ತುಂಬಾ ಅನ್ಯಾಯ
ನನ್ನಯ ನಡೆ ನುಡಿ ನಿನ್ನನೇ ಬಯಸುತ
ಬದಲಾಗುವುದು ಇನ್ನು ಖಚಿತ|| 1 ||
ನಿನ್ನ ನೃತ್ಯಕೆ ಸಿದ್ಧವಾಗಿದೆ
ಅಂತರಂಗದ ರಂಗಸಜ್ಜಿಕೆ
ನಿನ್ನ ನೋಡದ ನನ್ನ ಜೀವನ
ಸುದ್ದಿ ಇಲ್ಲದ ಸುದ್ದಿಪತ್ರಿಕೆ
ಸೆರೆ ಸಿಕ್ಕಾಗ ಬೇಕಿಲ್ಲ ಜಾಮೀನು
ಸರಸಕ್ಕೀಗ ನಿಂದೇನೆ ಕಾನೂನು
ಕೊರೆಯುವ ನೆನಪಲಿ ಇರುಳನು ಕಳೆಯುತ
ಬೆಳಗಾಗುವುದು ಇನ್ನು ಖಚಿತ|| ೨ ||
ಪರಿಕರಗಳು
ಸಾಲದ ಮಾಸಿಕ ಕಂತು (EMI)
ಸಾಲದ ಮಾಸಿಕ ಕಂತು (EMI) ಎಂದರೆ ಹಣಕಾಸು ಸಂಸ್ಥೆಯೊಂದರಿಂದ ಸಾಲ ತೆಗೆದುಕೊಂಡಾಗ, ಪ್ರತಿ ಮಾಸ ಅಥವಾ ಪ್ರತಿಕಾಲದಲ್ಲಿ ಪಾವತಿಸಬೇಕಾದ ನಿಗದಿತ ಮೊತ್ತ. ಮಾಸಿಕ ಕಂತನ್ನು ಆನ್‌ಲೈನ್‌ನಲ್ಲಿ ಲೆಕ್ಕಾಚಾರ ಮಾಡಿ.
ಹೆಸರು ಹುಡುಕಿ
ಲಿಂಗ, ಪ್ರಕಾರ, ವರ್ಗ, ಜನಪ್ರಿಯತೆಯ ಆಧಾರದ ಮೇಲೆ ಹೆಸರುಗಳನ್ನು ಹುಡುಕಿ. ಸಮಾನಾರ್ಥಕ ಹೆಸರುಗಳನ್ನು ಹುಡುಕಿ.
ಕರ್ನಾಟಕ ರಾಜ್ಯ
ಕರ್ನಾಟಕದ ಈ ನಕ್ಷೆಯಲ್ಲಿ ನೀವು ಪ್ರತಿ ಜಿಲ್ಲೆಯ ಮೇಲೆ ಕ್ಲಿಕ್ ಮಾಡಿ, ಆ ಜಿಲ್ಲೆಯ ವಿವರಗಳು – ಹವಾಮಾನ, ಜನಸಂಖ್ಯೆ, ಪ್ರಮುಖ ನಗರಗಳು, ಆರ್ಥಿಕ ಚಟುವಟಿಕೆಗಳು ಮತ್ತು ಇತರೆ ಮಾಹಿತಿಗಳನ್ನು ಈ ಪುಟದ ಕೆಳಭಾಗದಲ್ಲಿ ಅಥವಾ ಬಲ ಭಾಗದಲ್ಲಿ ನೋಡಬಹುದಾಗಿದೆ. ಪುಟವನ್ನು ಅನ್ವೇಷಿಸಿ ಮತ್ತು ಕರ್ನಾಟಕದ ಬಗ್ಗೆ ಹೆಚ್ಚು ತಿಳಿದುಕೊಳ್ಳಿ!